ಭವಿಷ್ಯಕ್ಕಾಗಿ ಯುವಕೌಶಲ್ಯಗಳ ರೂಪಾಂತರ

16 Aug 2022

ವಿಧಾನ ಸೌಧದಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿAದ ಇಲಾಖೆಯ ವಿನೂತನ ಯೋಜನೆಗಳ ಉದ್ಘಾಟನೆ

ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗು ಜೀವನೋಪಾಯ ಇಲಾಖೆ ವತಿಯಿಂದ ವಿಶ್ವ ಯುವ ಕೌಶಲ್ಯ ದಿನ ೨೦೨೨ರ ಆಚರಣೆಯನ್ನು ೧೪ ಜುಲೈರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಬಾರಿಯ ಆಚರಣೆಯನ್ನು ಜಾಗತಿಕ ಮಟ್ಟದಲ್ಲಿ ಭವಿಷ್ಯಕ್ಕಾಗಿ ಯುವಕೌಶಲ್ಯಗಳ ರೂಪಾಂತರ ಎಂಬ ವಿಷಯದ ಮೇಲೆ ಕೇಂದ್ರೀಕರಿಸಲಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆಯ ಹಲವು ಭವಿಷ್ಯ-ಮುಖಿ ಉಪಕ್ರಮಗಳಿಗೆ ಚಾಲನೆ ನೀಡಲಾಯಿತು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ‘ಒಂದು ಜಿಲ್ಲೆ, ಒಂದು ಕೌಶಲ್ಯ’, ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್, ಅಮೃತ ಮುನ್ನಡೆ, ಇ-ಕೌಶಲ್ಯ ಕಲಿಕೆ ನಿರ್ವಾಹಣಾ ವ್ಯವಸ್ಥೆ, ಹಾಗು ಇತರೆ ವಿನೂತನ ಉಪಕ್ರಮಗಳನ್ನು ಹಾಗು ಯೋಜನೆಗಳನ್ನು ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಡಾ. ಸಿ. ಎನ್. ಅಶ್ವಥನಾರಾಯಣ್, ಸನ್ಮಾನ್ಯ ಸಚಿವರು, ಉನ್ನತ ಶಿಕ್ಷಣ, ಇಲೆಕ್ಟಾçನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ; ಡಾ. ಎಸ್. ಸೆಲ್ವಕುಮಾರ್, ಭಾ.ಆ.ಸೇ., ಪ್ರಧಾನ ಕಾರ್ಯದರ್ಶಿಗಳು, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ; ಶ್ರೀಮತಿ ಜ್ಯೋತಿ ಕೆ., ಭಾ.ಆ.ಸೇ., ಆಯುಕ್ತರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ; ಕು. ಮಂಜುಶ್ರೀ ಎನ್., ಭಾ.ಆ.ಸೇ., ಮಿಷನ್ ನಿರ್ದೇಶಕರು, ಜೀವನೋಪಾಯ ಮಿಷನ್; ಶ್ರೀ ಅಶ್ವಿನ್ ಗೌಡ, ಭಾ.ಕಂ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ; ಶ್ರೀ ಎಚ್. ರಾಘವೇಂದ್ರ, ಐ.ಆರ್.ಪಿ.ಎಸ್., ವ್ಯವಸ್ಥಾಪಕ ನಿರ್ದೇಶಕರು, ಜಿ.ಟಿ.ಟಿ.ಸಿ.; ಹಾಗು ಶ್ರೀ ಬಸವರಾಜ ಎಂ. ಗೋಟೂರ್, ನಿರ್ದೇಶಕರು, ಸಿಡಾಕ್, ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯುವಜನತೆಯಲ್ಲಿ ಕೌಶಲ್ಯಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳು, ಸಾಮಾನ್ಯ ಶಿಕ್ಷಣದೊಂದಿಗೆ, ವೃತ್ತಿಪರ ತರಬೇತಿಯ ಏಕೀಕರಣದ ಮೂಲಕ ಇಡೀ ದೇಶದಲ್ಲಿ ಕರ್ನಾಟಕವನ್ನು ಕೌಶಲ್ಯಗಳ ಶಕ್ತಿಕೇಂದ್ರವನ್ನಾಗಿ ಮಾಡುವ ಸರ್ಕಾರದ ಗುರಿಯನ್ನು ಹಂಚಿಕೊAಡರು. ಕರ್ನಾಟಕದಲ್ಲಿ ಆರು ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳನ್ನು ಐ.ಐ.ಟಿ.ಗಳ ದರ್ಜೆಗೆ ಏರಿಸಲು ಉನ್ನತೀಕರಣವನ್ನು ನಡೆಸಲಾಗುತ್ತಿದೆ ಎಂದು ಘೋಷಿಸಿದರು.

ಸನ್ಮಾನ್ಯ ಸಚಿವರು ಸಭೆಯನ್ನುದ್ದೇಶಿಸಿ, ಕೌಶಲ್ಯ ಅಭಿವೃದ್ಧಿ ಇಲಾಖೆಯ ವಿನೂತನ, ಭವಿಷ್ಯ-ಮುಖಿ ಯೋಜನೆಗಳ ಕುರಿತು ಮಾತನಾಡಿದರು. ಡಾ. ಎಸ್. ಸೆಲ್ವಕುಮಾರ್‌ರವರು ವಿಶ್ವ ಯುವ ಕೌಶಲ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಇಲಾಖೆಯ ಪ್ರಮುಖ ಯೋಜನೆಗಳನ್ನು ಹಾಗು ಉಪಕ್ರಮಗಳನ್ನು ಬಿಂಬಿಸುವ ವಿಡಿಯೋವೊಂದನ್ನು ಪ್ರಸ್ತುತಪಡಿಸಲಾಯಿತು.

ಇಂಡಿಯಾ ಸ್ಕಿಲ್ಸ್ ೨೦೨೧ನ ವಿಜೇತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇದರೊಂದಿಗೆ, ೨೦೨೪ರಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಗೆ ಆಯ್ಕೆಗಾಗಿ ೨೦೨೨-೨೦೨೩ ಸಾಲಿನಲ್ಲಿ ಆಯೋಜಿಸಲಾಗುತ್ತಿರುವ ವಲಯ, ರಾಜ್ಯ ಹಾಗು ರಾಷ್ಟಿçÃಯ ಸ್ಪರ್ಧೆಗಳಿಗೆ ಗಣ್ಯರು ಚಾಲನೆ ನೀಡಿದರು.  ವರ್ಲ್ಡ್ ಸ್ಕಿಲ್ಸ್ನ ಮ್ಯಾಸ್ಕಾಟ್ ‘ಸ್ಕಿಲ್ಲಿ’ ಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಕೆ.ಎಸ್.ಡಿ.ಸಿ. ಆಯೋಜಿಸಿದ್ದ ‘ಸ್ಕಿಲ್ಲತಾನ್’ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಗಣ್ಯರು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕೌಶಲ್ಯಗಳ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು.

ಸಂಜೀವಿನಿ – ಕೆ.ಎಸ್.ಆರ್. ಎಲ್.ಪಿ.ಎಸ್. ಹಾಗು ಕೆ.ಎಸ್.ಡಿ.ಸಿ.ಯ ನಡುವೆ ೨೫,೦೦೦ ಮಹಿಳಾ ಉದ್ಯಮಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಕೆ.ಎಸ್.ಡಿ.ಸಿಯ ಮುಖಾಂತರ ನೀಡುವ ಕುರಿತ ಒಪ್ಪಂದಗಳ ವಿನಿಮಯ ನಡೆಯಿತು. ಕೆ.ಎಸ್.ಡಿ.ಸಿ. ಹಾಗು ಮೈಕ್ರೋಸಾಫ್ಟ್ ನಡುವೆ ಡಿಜಿಟಲ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಒಪ್ಪಂದಗಳ ವಿನಿಮಯ ನಡೆಯಿತು. ಐ.ಟಿ.ಐ. ಆಯುಕ್ತಾಲಯ ಹಾಗು ಇನ್ಫೋಸಿಸ್ ನಡುವೆ ಸ್ಪಿçಂಗ್‌ಬೋರ್ಡ್ ಡಿಜಿಟಲ್ ಪ್ಲಾಟ್‌ಫಾರ್ಮ್ನ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಕುರಿತು ಒಪ್ಪಂದದ ವಿನಿಮಯ ನಡೆಯಿತು.

ಜಿ.ಟಿ.ಟಿ.ಸಿ. ಹಾಗು ಟೊಯೋಟ ಕರ‍್ಲೋಸ್ಕರ್ ನಡುವೆ ಜಿ.ಟಿ.ಟಿ.ಸಿ. ಅಭ್ಯರ್ಥಿಗಳ ಆನ್-ದ-ಜಾಬ್ ತರಬೇತಿಯ ಕುರಿತು ಒಪ್ಪಂದಗಳ ವಿನಿಮಯ ನಡೆಯಿತು.

ರಾಷ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ವಾಹನ ಚಾಲನೆಯಲ್ಲಿ ತರಬೇತಿ ಪಡೆದ ಸ್ವಸಹಾಯ ಸಂಘಗಳ ಮಹಿಳೆಯರು ವೇದಿಕೆ ಮೇಲೆ ತಮ್ಮ ತರಬೇತಿಯ ಕುರಿತ ಅನುಭವಗಳನ್ನು ಹಂಚಿಕೊAಡರು. ಈ ಮಹಿಳೆಯರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳೊಡನೆ ಮಾತನಾಡುವ ಅವಕಾಶವನ್ನು ಸಹ ಕಲ್ಪಿಸಲಾಯಿತು. ಎನ್.ಆರ್.ಎಲ್.ಎಂ. ಅಡಿಯಲ್ಲಿ ಸಮರ್ಥನಂ ಟ್ರಸ್ಟ್ನ ಮೂಲಕ ವಿಕಲಚೇತನರಿಗೆ ರೂಪಿಸಿದ ವಿಶೇಷ ಕಾರ್ಯಕ್ರಮದ ಫಲಾನುಭವಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಯುವಜನತೆಯಲ್ಲಿ ಉದ್ಯೋಗ ಹಾಗು ಉದ್ಯಮಶೀಲತೆಗಾಗಿ ಕೌಶಲ್ಯದ ಮಹತ್ವದ ಕುರಿತು ಅರಿವು ಮೂಡಿಸಲು ವಿಶ್ವ ಯುವ ಕೌಶಲ್ಯ ದಿನವನ್ನು ಪ್ರತಿ ವರ್ಷ ಜುಲೈ ೧೫ರಂದು ಆಚರಿಸಲಾಗುತ್ತದೆ. ಸಂಪನ್ಮೂಲಗಳನ್ನು ಜಾಗತ್ತಿನಾದ್ಯಂತ ಕೌಶಲ್ಯ ವ್ಯವಸ್ಥೆಗಳ ಬಲವರ್ಧನೆಗೆ ಮೀಸಲಿಡಲು ಈ ಆಚರಣೆ ಉತ್ತಮ ಅವಕಾಶವಾಗಿದೆ.

 

 

 

Total Comments - 0

Leave a Reply